ಇಲ್ಲಿ ಯಾರೂ ಮುಖ್ಯರಲ್ಲ ! ಯಾರೂ ಅಮುಖ್ಯರಲ್ಲ…

ರಾಷ್ಟ್ರಕವಿ ಕುವೆಂಪು ಅವರು ಬರೆದ ಮಲೆಗಳಲ್ಲಿ ಮದುಮಗಳು ಕಾದಂಬರಿ ಕನ್ನಡ ಭಾಷೆಯ ವಿಸ್ಮಯಗಳಲ್ಲಿ ಒಂದು, ಹತ್ತೊಂಬತ್ತನೆಯ ಶತಮಾನದ ಕೊನೆಯ ಪಾದದ ಮಲೆನಾಡಿನ ಕತೆ ಇದು.  ನಿಸರ್ಗದ ನಿಗೂಢಗಳ ತಾಣದಲ್ಲಿ ಹುಲಿಕಲ್ಲು ಗುಡ್ಡದ ಸುತ್ತ ಮುತ್ತ ಇರುವ ಹಳ್ಳಿಗಳ ಜೀವ ಜಾಲದ ಬದುಕಿನ ವಿವರಗಳೇ ಮೂರ್ತಗೊಂಡಿರುವ ಅನನ್ಯ ಕಥನ.  ಈ ಬರಹ.  ಆಧುನಿಕತೆಯ ಪ್ರವೇಶವು ಭಾರತೀಯ ಗ್ರಾಮ ಸಮಾಜದ ಬದುಕಿನಲ್ಲಿ ತಂದ ಸಾಮಾಜಿಕ ತಲ್ಲಣಗಳ ನಿರೂಪಣೆಯೇ ಈ ಬರಹದ ಜೀವಾಳ.  ಇದು ಆರು ತಿಂಗಳ ಅವಧಿಯಲ್ಲಿ ನಡೆಯುವ ಕಥನವಾದರೂ ಹಲವು ಪ್ರಯಾಣಗಳನ್ನು ಮೈಯಾಗೆ ಪಡೆದಿರುವ ಕಾದಂಬರಿ.  ಮಲೆಗಳಲ್ಲಿ ಮದುಮಗಳು ಕನ್ನಡ ಸಂವೇದನೆಯನ್ನು ಮಸೆಯುವ ಕಲ್ಲಾಗಿರುವುದು ಕನ್ನಡಿಗರ ಪುಣ್ಯ.

ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಸಹಯೋಗದಲ್ಲಿ ಪ್ರಯೋಗಿಸುವ ಕನ್ನಡದ ಮೊಟ್ಟ ಮೊದಲ ಜ್ಞಾನಪೀಠ ಹಾಗೂ ಮಲೆಗಳಲ್ಲಿ ಮದುಮಗಳು ಸುವರ್ಣ ಸಂಭ್ರಮದಲ್ಲಿ, ರಾಷ್ಟ್ರಕವಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯ 9 ಗಂಟೆಗಳ ರಾತ್ರಿ ಪೂರ ರಂಗ ಪ್ರಯೋಗ- ಬೆಂಗಳೂರಿನಲ್ಲಿ…

ನಾಲ್ಕನೇ ಬಾರಿಗೆ, ಮತ್ತೊಮ್ಮೆ ‘ಮಲೆಗಳಲ್ಲಿ ಮದುಮಗಳು ನಾಟಕ’ ನಿಮ್ಮ ಮುಂದಿದೆ!  ಅದೇ ಕಲಾಗ್ರಾಮದಲ್ಲಿ, ಕೆರೆಯಂಗಳರಂಗ, ಬಿದಿರುಮಳೆರಂಗ, ಬಯಲುರಂಗ ಮತ್ತು ಹೊಂಗೆರಂಗ ಹೊಸ ರೂಪದಲ್ಲಿ ಮೈದಳೆದಿದೆ.  ರಂಗಾಸಕ್ತರನ್ನು ಮತ್ತೆ ಕೈ ಬೀಸಿ ಕರೆಯುತ್ತಿದೆ.  ನೀವು ಬನ್ನಿ, ನಿಮ್ಮ ನೆಂಟರು, ಸ್ನೇಹಿತರು ಎಲ್ಲರನ್ನೂ ಕರೆತನ್ನಿ….

ಬಯಲು ರಂಗಮಂದಿರಗಳು

This slideshow requires JavaScript.

ಈಗಾಗಲೇ ಪ್ರದರ್ಶನಗೊಂಡ ನಾಟಕದ ಕೆಲವು ಚಿತ್ರಗಳು

ಹೆಚ್ಚಿನ ಚಿತ್ರಗಳಿಗೆ ಚಿತ್ರ ಸಮೂಹಕ್ಕೆ ಭೇಟಿ ನೀಡಿ.

NSD Logo


ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ
ಕಲಾಗ್ರಾಮ, ಮಲ್ಲತ್ತಹಳ್ಳಿ ಬಸ್ ನಿಲ್ದಾಣ
ಬೆಂಗಳೂರು ವಿ.ವಿ ಆವರಣ (ಜ್ಞಾನ ಭಾರತಿ) ಹಿಂಬಾಗ
ಬೆಂಗಳೂರು- 560056

Govt Kar

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕರ್ನಾಟಕ ಸರ್ಕಾರ
ಕನ್ನಡ ಭವನ, ಜೆ. ಸಿ. ರಸ್ತೆ
ಬೆಂಗಳೂರು- 560002